Tuesday, August 17, 2010

ಆತುರ ತಂದ ಅವಾಂತರ
















ದಿನಾಂಕ ೧೫-೦೮-೨೦೧೦ ಸ್ವಾತಂತ್ರ್ಯ ದಿನಾಚಾರಣೆ.ಅಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ಮಹಾ ದಿನ.ಪರಕೀಯರಿಂದ ವಿಮುಕ್ತಿ ಹೊಂದಿದ ದಿನ .ಎಂದಿನಂತೆ ಬೆಳಿಗ್ಗೆ ೬ ಗಂಟೆಗೆ ನಾನು ಎದ್ದು ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಿ ನಮ್ಮೂರಿನ ಶಾಲೆಗೆ ಬೇಟಿ ಕೊಟ್ಟೆ .ತಡ ನಂತರ ಎಲ್ಲರೊಂದಿಗೆ ನಾನು ಕೂಡಿ ರಾಷ್ಟ್ರ ಗೀತೆಯನ್ನು ರಾಗವಾಗಿ ಹಾಡಿ ಮುಗಿಸಿದೆ.ನಮ್ಮೂರಿನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿ ಆನಂದಿಸಿ ನನ್ನ ಬಾಲ್ಯದ ನೆನಪುಗಳನ್ನು ಮೆಲಕುಹಾಕಿಕೊಂಡೆ.ನಂತರ ಮನೆಗೆ ಬಂದು ನಮ್ಮ ಅಕ್ಕನವರು ತಿಳಿಸಿದಂತೆ ಚಿಕ್ಕಬಳ್ಳಾಪುರ ದಲ್ಲಿನ ನಮ್ಮ ನೆಂಟರ ಗೃಹ ಪ್ರವೇಶಕ್ಕೆ ಹೋಗಲು ರೆಡಿಯಾದೆ.ನಮ್ಮ ಅಕ್ಕ ಕೊಟ್ಟ ಚಿತ್ರಾನ್ನವನ್ನು ತಿಂದು ನನ್ನ ಬೈಕನ್ನು ಏರಿ ಆನಂದದಿಂದ ಹೊರಟೆ.
ಚಿಕ್ಕಬಳ್ಳಪುರದಲ್ಲಿನ ನಮ್ಮ ನೆಂಟರ ಮನೆಯ ಗೃಹ ಪ್ರವೇಶಕ್ಕೆ ಹೋಗಿ ಅಲ್ಲಿ ನನಗೆ ಪರಿಚಯ ವಿರುವವರ ಅತ್ತಿರ ಮಾತನಾಡಿ ಗೃಹ ಪ್ರವೇಶಕ್ಕೆ ನಮ್ಮ ಮನೆಯಲ್ಲಿ ನೀಡಿದ ಉಡುಗೂರೆಯನ್ನು ನೀಡಿದೆ.ನಂತರ ಊಟವನ್ನು ಮುಗಿಸಿದೆ.ಎಲ್ಲರಂತೆಯೇ ನಾನು ಸಹ ಹೊರಡಲು ರೆಡಿಯಾದೆ. ಅವಾಗ ನಮ್ಮ ಚಿಕ್ಕಪ್ಪನ ಮಗನೂ ಸಹ ನನ್ನೊಂದಿಗೆ ನಮ್ಮ ಊರಿಗೆ ಬರಲು ರೆಡಿಯಾದ.
ಸರಿ ಇಬ್ಬರು ಸೇರಿ ನಮ್ಮ ಬೈಕಿನಲ್ಲಿ ಸವಾರಿ ಮಾಡಿಕೊಂಡು ಹೊರಟೆವು.ಮತ್ತು ನಿದಾನವಾಗಿ ಬೈಕನ್ನು ನಡೆಸಿಕೊಂಡು ಹೋಗುತ್ತಿರುವಾಗ ,ಮೇಲಿನ ಗಾಡಿ ಬಂದು ಅಪ್ಪಳಿಸಿ ಇಬ್ಬರೂ ನೆಲಕ್ಕೆ ಬಿದ್ದೆವು .ನೆಲದಿಂದ ಎದ್ದ ನಾನು ನನ್ನ ತಮ್ಮನನ್ನು ನೋಡದೆ ಮೇಲಿನ ಗಾಡಿಯ ಮಾಲಿಕನನ್ನು ತಳಿಸಿದೆ. ಇದರಿಂದ ತೃಪ್ತಿಯಾಗದ ನಾನು ಪೋಲೀಸ್ ಸ್ಟೇಶನ್ ಗೆ ಹೋಗಿ ಕಂಪ್ಲೇಂಟ್ ದಾಖಲಿಸಲು ಮುಂದಾದೆ ಆದರೆ ನನ್ನ ತಮ್ಮ ನನ್ನು ಸಮಾದಾನ ಪಡಿಸಿದ . ನಂತರ ನೋಡಿದರೆ ನಮಗೆ ಆಕ್ಸಿಡೆಂಟ್ ಮಾಡಿದ ವ್ಯಕ್ತಿ ಸುಮಾರು ೬೦ ರಿಂದ ೬೫ ರ ವಯಸ್ಸುಳ್ಳವರಾಗಿದ್ದರುನನಗೆ ತುಂಬಾ ಬೇಜಾರಾಗಿ ಅವರಲ್ಲಿ ಕ್ಷಮೆಯಾಚಿಸಿದೆ ಆದರೆ ಹಾಗಭುದಾದ ಅಚಾತುರ್ಯ ಆಗಾಗಲೇ ಆಗಿಹೋಗಿತ್ತು. ಇದರಿಂದ ನನಗೂ ಮನಸ್ಸಿಗೆ ತುಂಬಾ ಬೇಜಾರಾಗಿ ಅವರಲ್ಲಿ ಕ್ಷಮೆ ಯಾಚಿಸಲು ಮುಂದಾದೆ ಆದರೆ ಆಗಿರುವ ಅಚಾತುರ್ಯದಿಂದ ಆ ವ್ಯಕ್ತಿಯು ಈಗಾಗಲೇ ನೊಂದಿದ್ದ .
ಇದರಿಂದ ನನಗೂ ತುಂಬಾ ಮನಸ್ಸಿಗೆ ಆಘಾತ ವಾಗಿ ಕ್ಷಮೆ ಯಾಚಿಸಿದೆ.
ಇದರಿಂದ ನನಗೆ ತುಂಬಾ ಬೇಜಾರಾಗಿ ಇನ್ನು ಮುಂದೆ ನಾನು ಆತುರ ಪದಬಾರದೆಂದು ತೀರ್ಮಾನಿಸಿದೆ.
ಆದರೆ ಹಾಗಿರುವ ಅನಾಹುತಕ್ಕೆ ಕಾರಣ ನಾನು ತಪ್ಪಿಗೆ ಶಿಕ್ಷೆ ಇಗಾಗಲೇ ಅನುಭವಿಸಿದೆ .ಎಗೆಂದರೆ ಆಕ್ಸಿಡೆಂಟ್ ನೋವು ನನಗೆ ಮರೆಯಲಾಗದ ಅನುಭವದ ನೋವು ನನ್ನ ಜೊತೆಯಾಗಿರುತ್ತದೆ.ದುಡುಕುವುದು ಎಲ್ಲರ ಗುಣ ಆದರೆ ಅದನ್ನು ತಿದ್ದಿ ನಡೆದರೆ ಜೀವನ ಪಾವನ ಇದನ್ನು ನನ್ನ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಿರುತ್ತೇನೆ .
ಇದರಿಂದ ನಾನು ಕಲಿತ ಪಾಠ ಭಾರತಕ್ಕೆ ಸ್ವಾತಂತ್ರ್ಯ ಬಂದರೂ ಸ್ವಾತಂತ್ರ್ಯದಿಂದ ಗಾಡಿಯಲ್ಲಿ ಓಡಾಡುವ ನಮಗೆ ಸ್ವಾತಂತ್ರ್ಯವಿಲ್ಲ ಎಂದು ತಿಳಿದು ಮನಸ್ಸಿಗೆ ತುಂಬಾ ದುಃಖವಾಗಿರುತ್ತದೆ.